Monday, April 7, 2014

ನಿರ್ಭಯವಾಗಿ ಮತ ಚಲಾಯಿಸಿ , ಬೀರಣಿಗಿ..


ಕಂಪ್ಲಿ, ಏಪ್ರೆಲ್-7. ಸಂಸದರ ಚುನಾವಣೆಯಲ್ಲಿ ಯಾವುದೇ ಅಮೀಷಕ್ಕೆ ಒಳಗಾಗದೆ ಮತ ಚಲಾಯಿಸುವಂತೆ ಇಲ್ಲಿನ ಪುರಸಭೆಯ ಸಿಬ್ಬಂದಿ ಸೇರಿದಂತೆ ಪೌರಕಾರ್ಮಿಕರು ಭೀದಿ ಜಾತಾ ಮಾಡಿ ಪ್ರಚುರ ಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯಾದಿಕಾರಿ ಕೆ.ಬಿ.ಬೀರಣಿಗಿ  ಮಾತನಾಡಿ ಪ್ರಜಾಸತ್ತಾತ್ಮಕವಾಗಿ ಬಂದಿರುವ ಹಕ್ಕನ್ನು ಸ್ವ ಇಚ್ಚೆಯಿಂದ ಮತ ಚಲಾಯಿಸುವ ಮೂಲಕ ಅಭಿವೃದ್ಧಿ ಕಂಡುಕೊಳ್ಳಬೇಕಿದೆ. ಹಣ, ಮದ್ಯ, ಬಟ್ಟೆ ಇನ್ನಿತರೆ ವಸ್ತುಗಳನ್ನು ಪಡೆಯದೇ  ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದರು. ಅಮೀಷ ಒಡ್ಡುವುದು, ಪಡೆಯುವುದು ಅಪರಾದ. ಹಾಗಾಗಿ ಯಾರ ಬೆದರಿಕೆಗೂ ಬಗ್ಗದೆ ಇದೇ 17ರಂದು ನಡೆಯುವ ಚುನಾವಣೆಯಲ್ಲಿ ಮತ ಹಾಕಬೇಕೆಂದರಲ್ಲದೇ ಮತ ಹಾಕದೇ ಯಾರೂ ಅವಕಾಶ ವಂಚಿತರಾಗಬಾರದೆಂದು ಸಾರ್ವಜನಿಕರನ್ನು ಮನವಿ ಮಾಡಿದರು.
ಜಾತವು ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಮುಖ್ಯ ರಸ್ತೆ, ದಿನದ ಮಾರ್ಕೇಟ್, ಸಣಾಪುರ ರಸ್ತೆ, ಶಿಕಾರಿ ಕಾಲೋನಿ, ಎಂ.ಡಿ.ಕ್ಯಾಂಪ್ ಮತ್ತು ಕೊಟ್ಟಾಲು ರಸ್ತೆಗಳಲ್ಲಿ ಮುಂದುವರೆದು ಪುನಃ ಪರಸಭೆಗೆ ಅಂತ್ಯಗೊಂಡಿತು.



No comments:

Post a Comment